Sign In

Learning Curve March 2021


        Download Pdf version

 

ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ಬಹುಮಟ್ಟಿಗೆ ಯಾರಿಂದಲೂ ಕಲಿಸಲ್ಪಡದಿದ್ದರೂ ವಾಸ್ತವವಾಗಿ ಕಲಿಯುವ ವಿಷಯಗಳನ್ನು ನಾವು ಪರಿಗಣಿಸುವುದೇ ಇಲ್ಲ. ಮಕ್ಕಳ ಗ್ರಹಣಶಕ್ತಿ ಮತ್ತು ದೈಹಿಕ ಬೆಳವಣಿಗೆಯ ಜೊತೆಗೆ, ಹೆಚ್ಚು ಗಾಢವಾದ ಕಲಿಕೆ ಎನ್ನಬಹುದಾದ, ಭಾಷಾ ಸಾಮರ್ಥ್ಯದ ಬಗ್ಗೆ ಇಲ್ಲಿ ಹೇಳುತ್ತಿದ್ದೇನೆ. ಮಕ್ಕಳು ಹುಟ್ಟಿನಿಂದಲೇ ವ್ಯಾಕರಣದ ಜ್ಞಾನವನ್ನು ಅರಿತಿದ್ದು, ತಮ್ಮ ಮೊದಲ ಭಾಷೆಯನ್ನು ಹೊರಗಿನ ಯಾವ ಸಹಾಯವೂ ಇಲ್ಲದೇ ಮಾತನಾಡಬಲ್ಲರು ಎಂದು ಭಾಷಾತಜ್ಞ ನೋಮ್ ಚೋಮ್ಸಿ÷್ಕ ಅವರು ಹೇಳುತ್ತಾರೆ. ಹೀಗಾಗಿ, ಪ್ರತಿ ಮಗುವೂ ಕಲಿಯಬಲ್ಲದು ಎಂದು ನಾವು ಹೇಳುವುದರ ಜೊತೆಗೆ ಎಚ್ಚರಿಕೆಯ ಮಾತೊಂದನ್ನೂ ಸೇರಿಸುವ ಅಗತ್ಯವಿದೆ: ನಾವು ಹೇಳುವ ಕಲಿಕೆಯು ಮಗು ಶಾಲೆಯ ಮೆಟ್ಟಿಲು ಹತ್ತಿದ ಬಳಿಕ ಆಗುವ ಔಪಚಾರಿಕ ಕಲಿಕೆಯಷ್ಟೇ. ಶಾಲಾ ಶಿಕ್ಷಣವು “...ಕಲಿಕೆಗೆ ಎಡೆಮಾಡುವುದಿಲ್ಲ. ಪ್ರಪಂಚದಾದ್ಯAತ, ಶಾಲೆಯ ಒಳಗೆ ಕಲಿಯುವವರಿಗಿಂತ ಶಾಲೆಯ ಹೊರಗೆ ಕಲಿಯುವವರೇ ಹೆಚ್ಚಿದ್ದಾರೆ” ಎನ್ನುತ್ತದೆ ವಿಶ್ವಸಂಸ್ಥೆಯ ಮಕ್ಕಳ ನಿಧಿ ವರದಿ.

ಕೌಶಲ ರಹಿತ ಶಾಲಾ ಕಲಿಕೆಯಿಂದ ಮಕ್ಕಳು ಅವಕಾಶವಂಚಿತರಾಗುತ್ತಾರಲ್ಲದೆ, ಸಮಾಜದಿಂದ ಉತ್ತಮವಾದದ್ದನ್ನು ಪಡೆದು, ಉತ್ತಮವಾದುದನ್ನು ಸಮಾಜಕ್ಕೆ ಕೊಡುವ, ಜವಾಬ್ದಾರಿಯುತ ನಾಗರಿಕರಾಗಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವ ಸಾಧ್ಯತೆಗಳೂ ಕ್ಷೀಣಿಸುತ್ತವೆ. ಇಂತಹ ಅನೇಕ ತಲ್ಲಣಗಳನ್ನು ಕುರಿತಾಗಿ ದೇಶದ ಎಲ್ಲ ಭಾಗದ ಚಿಂತಕರ ವಿಸ್ತೃತ ಹರಹುಳ್ಳ ಲೇಖನಗಳನ್ನು ಈ ಸಂಚಿಕೆಯು ಒಳಗೊಂಡಿದ್ದು, ಸಹಾನುಭೂತಿ ಮತ್ತು ತಾದಾತ್ಮ್ಯವುಳ್ಳ ಶಿಕ್ಷಕರಿದ್ದಲ್ಲಿ ಪ್ರತಿ ಮಗುವೂ ನಿಜವಾಗಿ ಕಲಿಯಬಹುದು ಎಂಬ ನಂಬಿಕೆಯನ್ನು ಈ ಲೇಖನಗಳು ಘಂಟಾಘೋಷವಾಗಿ ಸಾರುತ್ತವೆ. ಈ ನಿರೂಪಣೆಯ ಹಿನ್ನೆಲೆಯನ್ನು ಇಲ್ಲಿನ ಪ್ರಧಾನ ಲೇಖನಗಳು ನೀಡಿದರೆ, ಉಳಿದ ಲೇಖನಗಳು ಸೂಕ್ತ ಮನೋಭಾವವಿದ್ದಾಗ ಏನನ್ನಾದರೂ ಮಾಡಲು ಸಾಧ್ಯ ಎಂಬುದನ್ನಷ್ಟೇ ದೃಢಪಡಿಸುತ್ತವೆ. ಉದಾಹರಣೆಗೆ, ಒಂದು ಲೇಖನವು ಹಲವು ಆಡುಭಾಷೆಗಳಿರುವ ದೇಶದ ದುರ್ಗಮ ಭಾಗದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ನಡೆಯುತ್ತಿರುವ ಪ್ರಯತ್ನಗಳನ್ನು ನಿರೂಪಿಸಿದರೆ, ಮತ್ತೊಂದು ಲೇಖನವು, ನಮ್ಮಲ್ಲಿ ಮಕ್ಕಳಿಗಾಗಿ ಮಿಡಿಯುವ ಹೃದಯವಿದ್ದು, ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಲ್ಲಿ ಮತ್ತು ತನ್ಮಯತೆಯಿದ್ದಲ್ಲಿ ಕಲಿಕೆ ಹೇಗೆ ವೃದ್ಧಿಸುತ್ತದೆ ಎಂಬುದನ್ನು ವರ್ಣಿಸುತ್ತದೆ. ಮತ್ತೊಂದು ಲೇಖನವು ಪ್ರಸಕ್ತ ಶಿಕ್ಷಣ ನೀತಿಗಳನ್ನು ಒಂದು ನಿರ್ದಿಷ್ಟ ಹಿನ್ನೆಲೆಯಲ್ಲಿರಿಸಿ ವಿಶ್ಲೇಷಿಸಿದರೆ, ಮಗದೊಂದು, ಮಕ್ಕಳಲ್ಲಿ “ಭಯಮೂಡಿಸುವ” ಗಣಿತದಂತಹ ವಿಷಯವನ್ನು ಕಲಿಸಲು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತದೆ. ಭಾಷೆಯನ್ನು ಗಳಿಸುವ ವಿಧಾನವನ್ನು ಚರ್ಚಿಸುವ ಲೇಖನವು, ಉನ್ನತ ಕಲಿಕೆಯ ತಳಹದಿಯಾದ ಓದು ಮತ್ತು ಸಾಕ್ಷರತೆಯ ಕಲಿಕೆಗಾಗಿ ಕಥೆ ಹಾಗೂ ಚಿತ್ರಗಳನ್ನು ಕಾಲ್ಪನಿಕವಾಗಿ ಬಳಸಲು ಶಿಫಾರಸ್ಸು ಮಾಡುತ್ತದೆ. ಚಿಂತನೆಯ ಆನ್ವಯಿಕತೆ, ಸಹಾನುಭೂತಿಯಿಂದ ಅರ್ಥೈಸುವಿಕೆ ಮತ್ತು ಕಲ್ಪನೆಯ ಮೂಲಕ ಪ್ರತಿ ಮಗುವಿನಿಂದಲೂ ಅತ್ಯುತ್ತಮವಾದುದನ್ನು ಹೊರತರುವ ನಿಟ್ಟಿನಲ್ಲಿ ಮಹಾನ್ ಸಾಧನೆಗಳನ್ನು ಮಾಡಬಹುದಾದರೂ, ಕಲ್ಪನಾಶೂನ್ಯವೂ, ದಯಾರಹಿತವೂ ಆದ ನಿರ್ವಹಣೆಯು ಇದಕ್ಕೆ ತಡೆಯೊಡ್ಡುತ್ತದೆ ಎಂಬುದು ಈ ಲೇಖನಗಳ ಉದ್ದಕ್ಕೂ ಕಂಡುಬರುವ ಸಮಾನ ರೂಪದ ಎಳೆಯಾಗಿದೆ.


   
ಸಂಪಾದಕ ಮಂಡಳಿ


ಸಂಪಾದಕ ಮಂಡಳಿ


 

ಸಂಪಾದಕರ ಮಾತು

ಪ್ರೇಮಾ ರಘುನಾಥ್
ಸಂಪಾದಕರ ಮಾತು


 

ಪರಿವಿಡಿ

ಅನಂತ್ ಗಂಗೋಲ
ಎಲ್ಲರಿಗೂ ಶಿಕ್ಷಣ | ಒಂದು ಸಂಭವನೀಯ ಸುಂದರ ಚಿತ್ರಣ


 
 
ಹೃದಯಕಾಂತ್ ದಿವಾನ್
ಎಲ್ಲರಿಗೂ ಶಿಕ್ಷಣ | ಹಾದಿಯುದ್ದಕ್ಕೂ ಸವಾಲುಗಳು


 

ವಿಮಲಾ ರಾಮಚಂದ್ರನ್
ಮಕ್ಕಳ ಸಾಮರ್ಥ್ಯದ ಮೇಲೆ ಶಿಕ್ಷಕರ ನಂಬಿಕೆಯ ಮಹತ್ವ


 
 
ಅಮೃತಾ ಮಾಸಿ
ಕಥೆ ಹೇಳುವುದರ ಮೂಲಕ ಮಕ್ಕಳನ್ನು ತೊಡಗಿಸಿಕೊಳ್ಳುವುದು


 

ಅರುಣಾ ಜ್ಯೋತಿ
ಪೂರಕ ಕಲಿಕಾ ವಾತಾವರಣ ರೂಪಿಸುವುದು


 
 
ಚಂದ್ರಿಕಾ ಸೋನಿ
ವಿಷಯಗಳ ಗಡಿಯನ್ನು ಮೀರಲು ಪತ್ರದ ಪ್ರಯಾಣ


 

ಇಸಿಇ ತಂಡ (ಸಂಗಾರೆಡ್ಡಿ)
ಮಕ್ಕಳು ವಿಭಿನ್ನ ರೀತಿಯಲ್ಲಿ ಕಲಿಯುತ್ತವೆ: | ಸಂಗಾರೆಡ್ಡಿಯ ಅನುಭವ


 
 
ಗಜೇಂದ್ರ ದೇವಾಂಗನ್
ಪರ್ಯಾಲೋಚನೆಗಾಗಿ ದಾಖಲೀಕರಣ | ಶಿಕ್ಷಕರೊಬ್ಬರ ದಿನಚರಿ


 

ಇಂದಿರಾ ವಿಜಯಸಿಂಹ
ಸಂತಸದಾಯಕ ಕಲಿಕೆಯ ಮೂಲಕ ಸಾಕ್ಷರತೆಯ ಸಾಧನೆ


 
 
ಜನಕ್ ರಾಮ್ ಮತ್ತು ಮುನ್ಷಿಲಾಲ್ ಬರ್ಸೆ
ಬೋಧನಾ ಕಲಿಕಾ ಸಾಮಗ್ರಿ (ಖಿಐಒ) | ಗಣಿತದ ಕಲಿಕೆ ಮತ್ತು ಅರ್ಥೈಸುವಿಕೆಗಾಗಿ ಇರುವ ಗೆಳೆಯ


 

ಕಮಲಾ ಭಂಡಾರಿ
ಭಾಷಾ ಬೋಧನೆ | ವಿಷಯವನ್ನು ಸಂದರ್ಭದೊಡನೆ ಬೆಸೆಯುವುದು


 
 
ಕಮಲೇಶ್ ಚಂದ್ರ ಜೋಶಿ
ಓದಲು ಕಷ್ಟಪಡುವ ಮಕ್ಕಳು


 

ಪೊಂಪಾ ಘೋಷಾಲ್
ವಿರುದ್ದಾರ್ಥಕ ಪದಗಳ ಬೋಧನೆ | ನನ್ನ ತರಗತಿಯ ಕಾರ್ಯತಂತ್ರ


 
 
ಪೂರ್ವಾ ಅಗರ್‌ವಾಲ್
ತರಗತಿಯಲ್ಲಿ ನನ್ನ ಪ್ರಯೋಗಗಳು


 

ಪ್ರತಿಭಾ ಕಟಿಯಾರ್
ಮಮತೆಯ ಮೃದು ಸ್ಪರ್ಶ ಸಾಕು...


 
 
ರಾಜಶ್ರೀ ಶ್ರೀನಿವಾಸನ್
ಸಮನ್ವಯ ತರಗತಿ'ಗಳಿಗೆ ಶಿಕ್ಷಕರನ್ನು ಸಜ್ಜುಗೊಳಿಸುವುದು

 

ಶಕ್ತಿಬ್ರತಾ ಸೇನ್ ಮತ್ತು ನಿಧಿ ವಿನಾಯಕ್
ವ್ಯಾಪಕ ಸಾಕ್ಷರ ಯೋಜನೆಯ ಅತ್ಯಗತ್ಯ ಆಧಾರ ಸ್ತಂಭಗಳು


 
 
ಸಂಧ್ಯಾ ಗಜ್ಜರ್ ಮತ್ತು ಸೋನಲ್ ಬಕ್ಷಿ
ಬುಡಕಟ್ಟು ಮಕ್ಕಳಿಗೆ ಬಹುಭಾಷಾ ಶಿಕ್ಷಣ | ವಸಂತಶಾಲಾದಿAದ ಆದ ಕಲಿಕೆಗಳು


 

ಡಾ. ಶಾಶ್ವತಿ ಪೈಕ್
ಶಿಕ್ಷಣ ನೀತಿ ಮತ್ತು ಆಚರಣೆಯಲ್ಲಿ | ಒಂದು ವಿಮರ್ಶಾತ್ಮಕ ದೃಷ್ಟಿಕೋನ


 
 
ಶೋಭಾ ಎಲ್. ಕವೂರಿ ಮತ್ತು ಶುಭಾ ಹೆಚ್.ಕೆ.
ವಲಸೆ ಕಾರ್ಮಿಕರ ಮಕ್ಕಳಿಗೆ ಅವಕಾಶಗಳು


 

ಸೋನಿಯಾ ಖುದಾನ್‌ಪುರ್
ಅನಾಸಕ್ತ ವಿದ್ಯಾರ್ಥಿಯ ಮೇಲೆ ಕಥೆಯ ಪರಿಣಾಮ


 
 
ಸುನಿಲ್ ಸಾಹ
ಮಕ್ಕಳ ಕಲಿಕೆ ಮತ್ತು ಸಾಮಾಜಿಕ ಸಂದರ್ಭ


 

ಸ್ವಾತಿ ಸರ್ಕಾರ್
ಪ್ರತಿ ಮಗುವಿಗೂ ನಾಲ್ಕು ಕಾರ್ಯಚಟುವಟಿಕೆಗಳು


 
 
ವಿದ್ಯಾ ದಾಸ್
ಮೊದಲ ತಲೆಮಾರಿನ ಶಾಲಾ ಮಕ್ಕಳಿಗೆ ಕಲಿಸುವುದು | ಪ್ರಮುಖ ಕಲಿಕೆಗಳು


 

ವಿನತಾ ವಿಶ್ವನಾಥನ್ ಮತ್ತು ರುಚಿ ಶೇವಡೆ
ಕಲಿಕೆಯ ಸಾಧನವಾಗಿ ನಿಯತಕಾಲಿಕೆಗಳು


 
 
ಇಂದಿರಾ ವಿಜಯಸಿಂಹ
ದ ರಿಫ್ಲೆಕ್ಟಿವ್ ಲರ್ನರ್: ಸೀಯಿಂಗ್ ‘ಮಿಸ್ಡ್ ಟೇಕ್ಸ್' ಇನ್ ಮಿಸ್ಟೇಕ್ಸ್ | ಪುಸ್ತಕ ವಿಮರ್ಶೆ


 

ಪ್ರೇಮಾ ರಘುನಾಥ್
ಶಿಕ್ಷಾ: ಮೈ ಎಕ್ಸ್ಪೆರಿಮೆಂಟ್ಸ್ ಆ್ಯಸ್ ಆ್ಯನ್ ಎಜುಕೇಷನ್ ಮಿನಿಸ್ಟರ್ | ಪುಸ್ತಕ ವಿಮರ್ಶೆ


 
 > View Next: i wonder...